ಲೊಜ್ಬಾನ್
From Lojban
ಲೊಜ್ಬಾನ್ ಒಂದು ಆಡುವ ಭಾಷೆ. ಇದು ಮಾನವ ಸಂಭಾಷಣೆಯಲ್ಲಿ ಇರುವ ಸಂದ್ಗಿದತೆಗಳನ್ನು ನಿವಾರಿಸಲು ವಿಶೇಷ ಗಮನ ಹರಿಸಿ ನಿರ್ಮಿಸಿದಂತಹ ಒಂದು ವಿಶಿಷ್ಟವಾದ ಭಾಷೆ. ಸೈಂಟಿಫಿಕ್ ಅಮೇರಿಕನ್ ಪತ್ರಿಕೆಯಲ್ಲಿ ಹಾಗೂ ಕೆಲ ವೈಜ್ಞಾನಿಕ ಪುಸ್ತಕಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಹೀಗೆ ಈ ಭಾಷೆ ಎಲ್ಲೆಡೆ ಹೆಸರುವಾಸಿಯಾಗಿದೆ. ಲೊಜ್ಬಾನ್ ಭಾಷೆಯನ್ನು ಐದು ದಶಕಗಳ ಕಾಲ ಹಲವಾರು ಪರಿಣಿತರು ಮತ್ತು ನೂರಾರು ಅಭಿಮಾನಿಗಳು ಸೇರಿ ಕಟ್ಟಿದ್ದಾರೆ.
ಲೊಜ್ಬಾನ್‌ನಲ್ಲಿ ಹಲವಾರು ಅಂಶಗಳು ಕೂಡಿ ಅದನ್ನು ವಿಶಿಷ್ಟಗೊಳಿಸಿದೆ:
- ಲೊಜ್ಬಾನ್ ಮನುಷ್ಯರ ನಡುವಿನ ಸಂಭಾಷಣೆಯಲ್ಲಿ ಉಪಯೋಗಿಸಬಹುದಾಗಿದೆ. ಮುಂದೆ ಇದನ್ನು ಕಂಪ್ಯೂಟರ್‌ನಲ್ಲಿ ಸಹ ಬಳಸಬಹುದಾಗಿದೆ.
- ಲೊಜ್ಬಾನ್‌ನನ್ನು ಯಾವುದೇ ಕ್ಷೇತ್ರ ಅಥವಾ ಭೌಗೋಳಿಕ ಸ್ಥಾನಕ್ಕೆ ಸೀಮಿತವಾಗಿರದಂತೆ ರೂಪಿಸಲಾಗಿದೆ .
- ಲೊಜ್ಬಾನ್‌ನ ವ್ಯಾಕರಣ ಸರಳವಾಗಿ ಸಂದೇಹ ರಹಿತವಾಗಿದೆ. ಇದನ್ನು ತರ್ಕದ ಆಧಾರದ ಮೇಲೆ ರೂಪಿಸಲಾಗಿದೆ.
- ಲೊಜ್ಬಾನ್‌ನ ಉಚ್ಛಾರಣೆ ಸುಲಭವಾಗಿದ್ದು ಶಬ್ದಗಳ ಸ್ವರಗಳ ಮೇಲೆ ಆಧಾರವಾಗಿದೆ. ಹಾಗಾಗಿ ಶಬ್ದಗಳ ಉಚ್ಛಾರಣೆ ಸರಾಗವಾಗಿ ಯಾವುದೇ ಸಂದೇಹಕ್ಕೆ ಎಡೆಮಾಡಿಕೊಡದಂತಿದೆ.
- ಬೇರೆ ಭಾಷೆಗಳಿಗೆ ಹೋಲಿಸಿದರೆ, ಲೊಜ್ಬಾನ್ ತುಂಬಾ ಸರಳ, ಇದನ್ನು ಸುಲಭವಾಗಿ ಕಲಿಯಬಹುದು.
- ಲೊಜ್ಬಾನ್‌ನ ೧೩೦೦ ಮೂಲ ಪದಗಳನ್ನು ಒಂದಕ್ಕೊಂದು ಸೇರಿಸಿಕೊಂಡು ಲಕ್ಷಾಂತರ ಪದಗಳ ಭಂಡಾರವನ್ನೇ ಸೃಷ್ಟಿಸಬಹುದು.
- ಲೊಜ್ಬಾನ್ ಭಾಷೆ ಸುಲಭವಾಗಿದೆ. ಈ ಭಾಷೆಯ ವ್ಯಾಕರಣದ ನಿಯಮಗಳಲ್ಲಿ ಯಾವುದೇ ರೀತಿಯ ಅಪವಾದಗಳು ಅಡಗಿಲ್ಲ.
- ಸೃಜನಾತ್ಮಕ, ನೇರವಾದ ಸಂಭಾಷಣೆಯಲ್ಲಿ ಇರುವ ತೊಡಕುಗಳನ್ನು ಲೊಜ್ಬಾನ್ ಭಾಷೆ ನಿವಾರಿಸುತ್ತದೆ.
- ಲೊಜ್ಬಾನ್ ಭಾಷೆ ಅನೇಕ ಉಪಯೋಗಗಳನ್ನು ಒಳಗೊಂಡಿದೆ. ವೈಜ್ಞಾನಿಕತೆಯಿಂದ ಸೃಜನಶೀಲತೆವರೆಗೆ, ಸೈದ್ಧಾಂತಿಕತೆಯಿಂದ ಪ್ರಾಯೋಗಿಕತೆಯವರೆಗೆ ಎಲ್ಲಾ ವಿಧದ ಸಂವಾದದಲ್ಲಿ ಇದನ್ನು ಬಳಸಬಹುದಾಗಿದೆ.
ಆಸಕ್ತಿ ಇದೆಯೇ? ಲೊಜ್ಬಾನ್ ಭಾಷೆಯ ತುಣುಕನ್ನು ನೋಡಿರಿ ಮತ್ತು ಕೇಳಿರಿ. ಈ ಪುಟವನ್ನು ಲೊಜ್ಬಾನ್ ಭಾಷೆಗೆ ಭಾಷಾಂತರಿಸುವುದನ್ನು ನೋಡಬಹುದು.
ಲೊಜ್ಬಾನ್ ಭಾಷೆಯನ್ನು ಈಗಲೇ ಕಲಿಯಿರಿ ಅಥವಾ ಈ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಿರು ಹೊತ್ತಿಗೆಯನ್ನು ಓದಿ.
ತಾರ್ಕಿಕ ಭಾಷಾ ತಂಡ