ಲೊಜ್ಬಾನ್

From Lojban
Revision as of 14:01, 9 July 2015 by Gleki (talk | contribs)
(diff) ← Older revision | Latest revision (diff) | Newer revision → (diff)
Jump to navigation Jump to search

ಲೊಜ್ಬಾನ್ ಒಂದು ಆಡುವ ಭಾಷೆ. ಇದು ಮಾನವ ಸಂಭಾಷಣೆಯಲ್ಲಿ ಇರುವ ಸಂದ್ಗಿದತೆಗಳನ್ನು ನಿವಾರಿಸಲು ವಿಶೇಷ ಗಮನ ಹರಿಸಿ ನಿರ್ಮಿಸಿದಂತಹ ಒಂದು ವಿಶಿಷ್ಟವಾದ ಭಾಷೆ. ಸೈಂಟಿಫಿಕ್ ಅಮೇರಿಕನ್ ಪತ್ರಿಕೆಯಲ್ಲಿ ಹಾಗೂ ಕೆಲ ವೈಜ್ಞಾನಿಕ ಪುಸ್ತಕಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಹೀಗೆ ಈ ಭಾಷೆ ಎಲ್ಲೆಡೆ ಹೆಸರುವಾಸಿಯಾಗಿದೆ. ಲೊಜ್ಬಾನ್ ಭಾಷೆಯನ್ನು ಐದು ದಶಕಗಳ ಕಾಲ ಹಲವಾರು ಪರಿಣಿತರು ಮತ್ತು ನೂರಾರು ಅಭಿಮಾನಿಗಳು ಸೇರಿ ಕಟ್ಟಿದ್ದಾರೆ.

ಲೊಜ್ಬಾನ್‌ನಲ್ಲಿ ಹಲವಾರು ಅಂಶಗಳು ಕೂಡಿ ಅದನ್ನು ವಿಶಿಷ್ಟಗೊಳಿಸಿದೆ:

  • ಲೊಜ್ಬಾನ್ ಮನುಷ್ಯರ ನಡುವಿನ ಸಂಭಾಷಣೆಯಲ್ಲಿ ಉಪಯೋಗಿಸಬಹುದಾಗಿದೆ. ಮುಂದೆ ಇದನ್ನು ಕಂಪ್ಯೂಟರ್‌ನಲ್ಲಿ ಸಹ ಬಳಸಬಹುದಾಗಿದೆ.
  • ಲೊಜ್ಬಾನ್‌ನನ್ನು ಯಾವುದೇ ಕ್ಷೇತ್ರ ಅಥವಾ ಭೌಗೋಳಿಕ ಸ್ಥಾನಕ್ಕೆ ಸೀಮಿತವಾಗಿರದಂತೆ ರೂಪಿಸಲಾಗಿದೆ .
  • ಲೊಜ್ಬಾನ್‌ನ ವ್ಯಾಕರಣ ಸರಳವಾಗಿ ಸಂದೇಹ ರಹಿತವಾಗಿದೆ. ಇದನ್ನು ತರ್ಕದ ಆಧಾರದ ಮೇಲೆ ರೂಪಿಸಲಾಗಿದೆ.
  • ಲೊಜ್ಬಾನ್‌ನ ಉಚ್ಛಾರಣೆ ಸುಲಭವಾಗಿದ್ದು ಶಬ್ದಗಳ ಸ್ವರಗಳ ಮೇಲೆ ಆಧಾರವಾಗಿದೆ. ಹಾಗಾಗಿ ಶಬ್ದಗಳ ಉಚ್ಛಾರಣೆ ಸರಾಗವಾಗಿ ಯಾವುದೇ ಸಂದೇಹಕ್ಕೆ ಎಡೆಮಾಡಿಕೊಡದಂತಿದೆ.
  • ಬೇರೆ ಭಾಷೆಗಳಿಗೆ ಹೋಲಿಸಿದರೆ, ಲೊಜ್ಬಾನ್ ತುಂಬಾ ಸರಳ, ಇದನ್ನು ಸುಲಭವಾಗಿ ಕಲಿಯಬಹುದು.
  • ಲೊಜ್ಬಾನ್‌ನ ೧೩೦೦ ಮೂಲ ಪದಗಳನ್ನು ಒಂದಕ್ಕೊಂದು ಸೇರಿಸಿಕೊಂಡು ಲಕ್ಷಾಂತರ ಪದಗಳ ಭಂಡಾರವನ್ನೇ ಸೃಷ್ಟಿಸಬಹುದು.
  • ಲೊಜ್ಬಾನ್ ಭಾಷೆ ಸುಲಭವಾಗಿದೆ. ಈ ಭಾಷೆಯ ವ್ಯಾಕರಣದ ನಿಯಮಗಳಲ್ಲಿ ಯಾವುದೇ ರೀತಿಯ ಅಪವಾದಗಳು ಅಡಗಿಲ್ಲ.
  • ಸೃಜನಾತ್ಮಕ, ನೇರವಾದ ಸಂಭಾಷಣೆಯಲ್ಲಿ ಇರುವ ತೊಡಕುಗಳನ್ನು ಲೊಜ್ಬಾನ್ ಭಾಷೆ ನಿವಾರಿಸುತ್ತದೆ.
  • ಲೊಜ್ಬಾನ್ ಭಾಷೆ ಅನೇಕ ಉಪಯೋಗಗಳನ್ನು ಒಳಗೊಂಡಿದೆ. ವೈಜ್ಞಾನಿಕತೆಯಿಂದ ಸೃಜನಶೀಲತೆವರೆಗೆ, ಸೈದ್ಧಾಂತಿಕತೆಯಿಂದ ಪ್ರಾಯೋಗಿಕತೆಯವರೆಗೆ ಎಲ್ಲಾ ವಿಧದ ಸಂವಾದದಲ್ಲಿ ಇದನ್ನು ಬಳಸಬಹುದಾಗಿದೆ.

ಆಸಕ್ತಿ ಇದೆಯೇ? ಲೊಜ್ಬಾನ್ ಭಾಷೆಯ ತುಣುಕನ್ನು ನೋಡಿರಿ ಮತ್ತು ಕೇಳಿರಿ. ಈ ಪುಟವನ್ನು ಲೊಜ್ಬಾನ್ ಭಾಷೆಗೆ ಭಾಷಾಂತರಿಸುವುದನ್ನು ನೋಡಬಹುದು.

ಲೊಜ್ಬಾನ್ ಭಾಷೆಯನ್ನು ಈಗಲೇ ಕಲಿಯಿರಿ ಅಥವಾ ಈ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಿರು ಹೊತ್ತಿಗೆಯನ್ನು ಓದಿ.

ತಾರ್ಕಿಕ ಭಾಷಾ ತಂಡ

ಸುದ್ದಿ